ಸುಹಾಸ್ತಿ


ಸುಹಾಸ್ತಿ ಅಂದ ತಕ್ಷಣ ನೆನಪಾಗುವುದು ಬೆಂಗಳೂರಿನ ಒಂದು ಯುವಕರ ತಂಡ. ಅವರು ನಡೆಸುವ ಕಬಡ್ಡಿ ಪಂದ್ಯಾ. ಅವರು ನಡೆಸುವ ಲಗೋರಿ ಪಂದ್ಯಾ. ಅವರ ಸ್ವಚ್ಚತಾ ಆಂದೋಲನ ಅವರಿಗಿರುವ ಪರಿಸರ ಕಾಳಜಿ. ಹೌದು ಕಳೆದ ನಾಲ್ಕು ವರ್ಷಗಳಿಂದ ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಯಲ್ಲಿ ತಮ್ಮ ನ್ನು ತಾವು ತೋಡಗಿಸಿಕೊಂಡಿರುವ ಬೆಂಗಳೂರಿನ ಯುವಕರ ತಂಡವೇ ಸುಹಾಸ್ತಿ ಯುವ ಜೈನ್ ಮಿಲನ್,
ದಿನಾಂಕ.05-08-2014 ರಂದು ಪ್ರಾರಂಭವಾದ ಯುವ ಜೈನ್ ಮಿಲನ್ ಅದೇ ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತ ಬಂದಿತ್ತು.

ಅವುಗಳಲ್ಲಿ ಮುಖ್ಯವಾದವು ಆಗತಾನೆ ಅಸ್ಥಿತ್ವಕ್ಕೆ ಬಂದ ಮೋದಿ ಸರ್ಕಾರದ. ಸ್ವಚ್ಚ. ಭಾರತ ಆಂದೋಲನಕ್ಕೆ ಕೈ ಜೋಡಿಸಿದ ಸುಹಾಸ್ತಿ ಯುವ ಜೈನ್ ಮಿಲನ್ ಜಿನ ಬಸದಿಗಳ ಸ್ವಚ್ಚತಾ ಕಾರ್ಯಕ್ರಮವನ್ನು ಸತತ ನಾಲ್ಕು ವರ್ಷಗಳಿಂದ ಮಾಗಡಿ ರೋಡ್ ಜೈನ್ ಟೆಂಪಲ್ ಪುಟ್ಟೆನ್ ಳ್ಳಿ ಜೈನ್ ಟೆಂಪಲ್. ಮಂದಾರಗಿರಿ ಜೈನ್ ಟೆಂಪಲ್ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆಯ ಹಾರಿಗೆ ಜೈನ್ ಟೆಂಪಲ್ ಹಾಗೆ ಹಲವಾರು ಜಿನ ಮಂದಿರದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿ ಕೊಂಡು ವಿಭಿನ್ನ ರೀತಿಯಲ್ಲಿ ಧರ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿ ವರ್ಷವೂ ಗಿಡಗಳನ್ನು ನೆಡುತ್ತಾ ಬರುತ್ತಿರುವ ಈ ಜೈನ ಯುವಕರ ತಂಡ ಬೆಂಗಳೂರಿನ ಆನಂದ ಮಾರ್ಗ ಅನಾಥಾಶ್ರಮದ ಸುತ್ತಮುತ್ತ ನಗರದ ಲಗ್ಗೇರೆ ಬಡವಾಣೆ ಇತ್ತೀಚೆಗೆ (08-06-2018)ಮಂದಾರಗಿರಿ ಜೈನ್ ಟೆಂಪಲ್ ನ ಸುತ್ತ ಮುತ್ತ ಗಿಡಗಳನ್ನ ನೆಟ್ಟು ಪರಿಸರ ಕಾಳಜಿಯನ್ನು ಮೆರೆದಿದೆ.

ಇತ್ತೀಚಿನ ಮೊಬೈಲ್  Paternal ಇಂದ ಕ್ಯಾಂಡಿ ಕ್ರಶ್. ವಿಡಿಯೋ ಗೇಮ್. ಕ್ರಿಕೆಟ್. ಮುಂತಾದ ಆಧುನಿಕ ಆವುಗಳಿಂದಾಗಿ. ಜನ ಮಾನಸದಿಂದ ದೂರ ಸರಿಸುವ ಲಗೋರಿ. ಆಟವನ್ನು ಇಂದಿನ ಪ್ರತಿಪಲಾರಿಗೆ ಪರಿಚಯಿಸುವ ದೃಷ್ಟಿಯಿಂದ ನಗರದಲ್ಲಿ ಎರಡು ಬಾರಿ ಆಯೋಜಿಸಿ ಜನರ ಮನ ಸೆಳೆದಿತ್ತು. ಸುಹಾಸ್ತಿ ಯುವ ಜೈನ್ ಮಿಲನ್
       ಸುಹಾಸ್ತಿ ಯುವ ಜೈನ್ ಮಿಲನ್ ಅಂದರೆ ನೆನಪಾಗುವುದು ಕಬಡ್ಡಿ. ಎಸ್. ಎಸ್. ಎನ್. ಆರ್ವಿ. ಕಾಲೇಜು ಆವರಣದಲ್ಲಿ ಕಳೆದೆರಡು ವರ್ಷಗಳಿಂದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯವನ್ನು ಆಯೋಜಿ‌ಸುತ್ತಿರುವ ಸುಹಾಸ್ತಿ ಯುವ ಜೈನ್ ಮಿಲನ್ ರಾಜ್ಯದ ಯುವಕರ ಗಮನ ಸೆಳೆಯುದರಲ್ಲಿ ಯಶಸ್ವಿ ಆಗಿದೆ.

         
   ಯುವಕರ ಮೆಚ್ಚಿನ ಆಟವಾದ ಕ್ರಿಕೇಟ್ ಆಟವನ್ನು ಆಗಾಗ ನಡೆಸುವ ಸುಹಾಸ್ತಿ ಜೈನ್ ಮಿಲನ್ ಇನ್ನಿತರ ಜೈನ್ ಮಿಲನ್ ನ ಜೈನ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡು ಸ್ವಯಂ ಸೇವಕರಾಗಿ ಕೆಲಸ ಮಾಡಿ ಜೈನ ಧರ್ಮಿಯರ ಮನಗೆಲ್ಲುತ್ತಿರುವ. ಧರ್ಮಸೇವೆಯನ್ನು ಮಾಡುತ್ತಿರುವ ಈ ಸುಹಾಸ್ತಿ ಯುವ ಜೈನ್ ಮಿಲನ್ನ ಧರ್ಮ  ಸೇವೆ ಯನ್ನ ಗುರುತಿಸಿ ಹುಂಚದಲ್ಲಿ ನಡೆದ ಜೈನ್ ಮಿಲನ್ ಸಮಾವೇಶದಲ್ಲಿ ಗೌರವಿಸಲಾಗಿತ್ತು. ಜೈನ ಸಮುದಾಯಕ್ಕೆ ಇನ್ನೂ ಎತ್ತರಕ್ಕೆ ಬೆಳೆದು ಆಸ್ತಿ ಆಗಲಿ...

Comments

Popular posts from this blog

ಮಹಾನ್ ವೀರ

ಪೂಜ್ಯ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು